Job Description: ಲಂಚ ನಿಗ್ರಹ ಪ್ರಮಾಣ ಸಂಯೋಜನಾ ಸಂಸ್ಥೆಯಾಗಿರುವ ಟ್ರೇಸ್ ಇತ್ತೀಚಿಗೆ ವಿಶ್ವದ 194 ದೇಶಗಳ 2020ರ ಸಾಲಿನ ಭ್ರಷ್ಟಾಚಾರದ ಜಾಗತಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. * ಈ ವರದಿಯ ಪ್ರಕಾರ, ಭಾರತವು ಪಟ್ಟಿಯಲ್ಲಿ 77ನೇ ಸ್ಥಾನ ಪಡೆದಿದ್ದು, ಕಳೆದ ವರ್ಷ 78ನೇ ಸ್ಥಾನ ಪಡೆದಿತ್ತು. * ಉತ್ತರ ಕೊರಿಯಾ, ತುರ್ಕಮೆನಿಸ್ಥಾನ್, ದಕ್ಷಿಣ ಸುಡಾನ್, ವೆನಿಜುವೆಲ, ಎರಿಟೆರಾ ಸೇರಿ ಹಲವು ರಾಷ್ಟ್ರಗಳಲ್ಲಿ ಲಂಚ ಪ್ರಮಾಣ ಅತಿ ಹೆಚ್ಚಾಗಿದೆ. * ಇನ್ನು, ಲಂಚದ ಪ್ರಮಾಣ ಕಡಿಮೆ ಇರುವ ದೇಶಗಳ ಪೈಕಿ ಡೆನ್ಮಾರ್ಕ್, ನಾರ್ವೇ, ಫಿನ್ ಲ್ಯಾಂಡ್, ಸ್ವೀಡನ್, ನ್ಯೂಜಿಲ್ಯಾಂಡ್ ದೇಶಗಳು ಮುಂಚೂಣಿಯಲ್ಲಿರುವದಾಗಿ ಟ್ರೇಸ್ ವರದಿ ಮಾಡಿದೆ. * 2019ರಲ್ಲಿ ಭಾರತವು 48 ಅಂಕಗಳೊಂದಿಗೆ 78ನೇ ಸ್ಥಾನ ಪಡೆದಿತ್ತು, ಮತ್ತು 2020 ನೇ ಸಾಲಿನಲ್ಲಿ 45 ಅಂಕಗಳೊಂದಿಗೆ 77 ನೇ ಸ್ಥಾನದಲ್ಲಿದೆ. * ವರದಿಯನ್ನು ನಾಲ್ಕು ಅಂಶಗಳನ್ನು ಆಧರಿಸಿ ಬಿಡುಗಡೆ ಮಾಡಲಾಗಿದ್ದು, ಅವುಗಳು ಈ ಕೆಳಗಿನಂತಿವೆ - ಸರಕಾರದೊಂದಿಗಿನ ವ್ಯಾವಹಾರಿಕ ಸಂವಹನ - ಲಂಚ ವಿರೋಧಿ ತಡೆಗಟ್ಟುವಿಕೆ ಮತ್ತು ಜಾರಿ - ಸರಕಾರ ಮತ್ತು ನಾಗರಿಕ ಸೇವೆಯಲ್ಲಿ ಪಾರದರ್ಶಕತೆ ಮತ್ತು ನಾಗರಿಕ ಸಮಾಜದ ಮೇಲ್ವಿಚಾರಣೆಯ ಸಾಮರ್ಥ್ಯ, - ಮಾಧ್ಯಮಗಳ ಪಾತ್ರ