Job Description: ಪಾಟ್ನಾ/ಪಣಜಿ: ಗೋವಾದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ, ಬಿಜೆಪಿಯ ಹಿರಿಯ ನಾಯಕಿಯೂ ಆದ ಮೃದುಲಾ ಸಿನ್ಹಾ ಅವರು ತಮ್ಮ 77 ನೇ ವಯಸ್ಸಿನಲ್ಲಿ ಇತ್ತೀಚಿಗೆ ನಿಧನರಾದರು. ಬಿಹಾರ ರಾಜ್ಯದಲ್ಲಿ 1942 ರ ನವೆಂಬರ್ 27ರಂದು ಜನಿಸಿದ್ದ ಇವರು ಗೋವಾ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಹೆಸರು ಮಾಡಿದ್ದರು. ಇನ್ನು ಕೇಂದ್ರ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿಯೂ ಕೆಲ ಕಾಲ ತಮ್ಮ ಸೇವೆ ಸಲ್ಲಿಸಿದ್ದಾರೆ.