Job Description: ತಮಿಳುನಾಡು ರಾಜ್ಯದ ಮೂಲದ ಖಾಸಗಿ ವಲಯದ ಲಕ್ಷ್ಮೀ ವಿಲಾಸ್ ಬ್ಯಾಂಕ್ನ ಆರ್ಥಿಕ ಪರಿಸ್ಥಿತಿ ಕುಸಿತ ಕಂಡ ಹಿನ್ನೆಲೆ ಭಾರತೀಯ ರಿಸರ್ವ್ ಬ್ಯಾಂಕ್ 30 ದಿನಗಳ ಕಾಲ ತಾತ್ಕಾಲಿಕ ಅಮಾನತ್ತಿಗೊಳಪಡಿಸಿದೆ. ಬ್ಯಾಂಕಿಂಗ್ ರೆಗ್ಯುಲೇಷನ್ ಆಯಕ್ಟ್ನ ಅನುಸಾರ RBI ಕೇಂದ್ರ ಸರ್ಕಾರಕ್ಕೆ ಲಕ್ಷ್ಮಿ ವಿಲಾಸ ಬ್ಯಾಂಕ್ನ್ನು ತಾತ್ಕಾಲಿಕ ನಿಷೇಧಕ್ಕೊಳಪಡಿಸುವಂತೆ ಮಾಡಿದ ಮನವಿ ಹಿನ್ನೆಲೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. * ಇನ್ನು ಬ್ಯಾಂಕ್ ಗ್ರಾಹಕರಿಗೆ ಡಿಸೆಂಬರ್ 16 ರವರೆಗೂ 25,000 ರೂಗಳ ವಿಥ್'ಡ್ರಾ ಮಿತಿಯನ್ನು ಹೇರಲಾಗಿದೆ.