Job Description: ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಒಕ್ಕೂಟವನ್ನು ಬ್ರಿಕ್ಸ್ ಎಂದು ಹೆಸರಿಸಲಾಗಿದ್ದು, 2020 ನೇ ಸಾಲಿನ 12 ನೇ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನಕ್ಕೆ ರಷ್ಯಾ ಆಥಿತ್ಯ ವಹಿಸಿತ್ತು. ಈ ವರ್ಚುಯಲ್ ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು ಬಹುಪಕ್ಷೀಯ ವ್ಯವಸ್ಥೆ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು, ಭಯೋತ್ಪಾದನೆ ನಿಗ್ರಹ, ವ್ಯಾಪಾರ, ಆರೋಗ್ಯ ಮತ್ತು ಇಂಧನಕ್ಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದವು. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿ ಭಯೋತ್ಪಾದನೆಯು ಇಂದು ಇಡೀ ವಿಶ್ವವೇ ಎದುರಿಸುತ್ತಿರುವ ಸಮಸ್ಯೆಯಾಗಿದ್ದು, ಉಗ್ರ ಸಂಘಟನೆಗಳನ್ನು ಬೆಂಬಲಿಸುವ, ನೆರವು ಒದಗಿಸುವ ರಾಷ್ಟ್ರಗಳನ್ನು ವಿರುದ್ಧ ಸೂಕ್ತ ಕ್ರಮಗಳನ್ನು ತೇಗುದುಕೊಳ್ಳುವ ಕುರಿತು ಬ್ರಿಕ್ಸ್ ರಾಷ್ಟ್ರಗಳು ಒಂದಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.