Job Description: ಭೋಪಾಲ್ : ಮಧ್ಯಪ್ರದೇಶ ರಾಜ್ಯ ಸರ್ಕಾರವು ರಾಜ್ಯದಲ್ಲಿ 'ಗೋವು ಸಚಿವಾಲಯ' ನಿರ್ಮಿಸಲು ತೀರ್ಮಾನ ಕೈಗೊಂಡಿದ್ದು, ಈ ಮೂಲಕ ಗೋವುಗಳ ಸಂರಕ್ಷಣೆಗಾಗಿ ಮುಂದಾಗಿದೆ. ಈ ಕುರಿತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚಿಗೆ ಘೋಷಣೆ ಮಾಡಿದ್ದಾರೆ. ಗೋವು ಸಚಿವಾಲಯದ ಭಾಗವಾಗಿ ಪಶು ಸಂಗೋಪನೆ, ಅರಣ್ಯ, ಪಂಚಾಯಿತಿ, ಗ್ರಾಮೀಣ ಅಭಿವೃದ್ಧಿ, ಗೃಹ ಮತ್ತು ರೈತ ಕಲ್ಯಾಣ ಇಲಾಖೆಗಳು ಸೇರ್ಪಡೆ ಮಾಡಲಾಗುವುದಾಗಿ ಮುಖ್ಯಮಂತ್ರಿ ಚೌಹಾಣ್ ತಿಳಿಸಿದ್ದಾರೆ. * ಮಧ್ಯ ಪ್ರದೇಶ ಸರ್ಕಾರವು ಇತ್ತೀಚಿಗಷ್ಟೇ 'ಲವ್ ಜಿಹಾದ್' ವಿರುದ್ಧ ಸೂಕ್ತ ಕಾನೂನು ರೂಪಿಸುವ ಕುರಿತು ಘೋಷಿಸಿತ್ತು.