Job Description: ಬೆಂಗಳೂರು : ವಿಶ್ವ ಆರ್ಥಿಕ ವೇದಿಕೆ ಯು ಜಿ-20 ಗ್ಲೋಬಲ್ ಸ್ಮಾರ್ಟ್ ಸಿಟಿ ಅಲಯನ್ಸ್ ನ ಭಾಗವಾಗಿ ಜಾಗತಿಕ ಮಟ್ಟದ ಗ್ಲೋಬಲ್ ಸ್ಮಾರ್ಟ್ ಸಿಟಿ ಯೋಜನೆಗಾಗಿ 22 ದೇಶಗಳ 36 ನಗರಗಳನ್ನು ಆಯ್ಕೆಮಾಡಿದ್ದು, ಈ ನಗರಗಳ ಪೈಕಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಭಾರತದ ಹೈದದರಾಬಾದ್, ಇಂದೋರ್, ಫರೀದಾಬಾದ ನಗರಗಳು ಆಯ್ಕೆಯಾಗಿವೆ. ಇನ್ನು ವಿವಿಧ ದೇಶಗಳ ಮಾಸ್ಕೊ, ಲಂಡನ್, ಟೊರೊಂಟೊ, ಬ್ರೆಸಿಲಿಯಾ, ಮೆಲ್ಬೋರ್ನ್, ದುಬೈ ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆಧುನಿಕ ತಂತ್ರಜ್ಞಾನದದ ಮೂಲಕ ರಸ್ತೆ ಪ್ರಯಾಣವನ್ನು ಸುರಕ್ಷಿತಗೊಳಿಸುವ ಜಾಗತಿಕ ಮಟ್ಟದ ಯೋಜನೆಗೆ ಬೆಂಗಳೂರು, ಹೈದದರಾಬಾದ್, ಇಂದೋರ್, ಫರೀದಾಬಾದನ್ನು ಆಯ್ಕೆ ಮಾಡಲಾಗಿದೆ. * ಗ್ಲೋಬಲ್ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ನಗರಗಳಲ್ಲಿ ಖಾಸಗಿಕರಣದ ರಕ್ಷಣೆ, ನಿರ್ವಹಣೆ, ಆಧುನಿಕ ಸೈಬರ್ ತಂತ್ರಜ್ಞಾನದ ಮೂಲಕ ವಿಶೇಷ ಚೇತನರಿಗೆ ಉತ್ತಮ ಸೇವೆ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸುವಲ್ಲಿ ನೆರವಾಗಲಿದೆ.