Job Description: ನವದೆಹಲಿ : ಭಾರತದಲ್ಲಿ 2021 ನೇ ಸಾಲಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಮಹಿಳೆಯರ ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯನ್ನು ಕೋರೋಣ ಸೋಂಕಿನ ಭೀತಿಯಿಂದ 2022ಕ್ಕೆ ಸಾಲಿಗೆ ಮುಂದೂಡಲಾಯಿತು. ಇತ್ತೀಚಿಗೆ ಸಭೆ ಸೇರಿದ್ದ ವಿಶ್ವ ಫುಟ್ಬಾಲ್ ಆಡಳಿತ ಮಂಡಳಿಯು ಭಾರತ ಹಾಗೂ ಕೋಸ್ಟರಿಕಾದಲ್ಲಿ ಈಗಾಗಲೇ ನಿಗದಿಪಡಿಸಿದಂತೆ ಮಹಿಳೆಯರ ಅಂಡರ್-17 ವಿಶ್ವಕಪ್ ಹಾಗೂ ಅಂಡರ್-20 ವಿಶ್ವಕಪ್ ಮುಂದೂಡಲು ತೀರ್ಮಾನಿಸಿದ್ದು, ಈ ಎರಡು ದೇಶಗಳಿಗೆ 2022ರ ಆವೃತ್ತಿಯ ವಿಶ್ವಕಪ್ ಆತಿಥ್ಯದ ವಹಿಸಲು ಅವಕಾಶ ನೀಡಲಾಯಿತು.