Job Description: ಲಂಡನ್ : ದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸುವ ಮೂಲಕ ದೇಶದ ಪರಿಸರವನ್ನು ಸಂರಕ್ಷಿಸುವ ಸಲುವಾಗಿ ರೂಪಿಸಿದ ಹಸಿರು ಕೈಗಾರಿಕಾ ಕ್ರಾಂತಿಯಲ್ಲಿ ಒಟ್ಟು 10 ಅಂಶಗಳ ಯೋಜನೆಯನ್ನು ರೂಪಿಸಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ 2030 ನೇ ವರ್ಷದಿಂದ ಜಾರಿಗೆ ಬರುವತೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಬ್ರಿಟನ್ ನಿಷೇಧಿಸಲು ಕ್ರಮ ಕೈಗೊಳ್ಳಲಿದೆ. * ಈ ಯೋಜನೆಗಾಗಿ ಬ್ರಿಟನ್ ಈಗಾಗಲೇ 12 ಬಿಲಿಯ ಪೌಂಡ್ (ಸುಮಾರು 1,18,260 ಕೋಟಿ ರೂಪಾಯಿ) ನಿಧಿಯನ್ನು ಮೀಸಲಿರಿಸಲಿದೆ. * ಈ ಯೋಜನೆಯಿಂದಾಗಿ ಒಟ್ಟು 2,50,000 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದ್ದು, 2050ರ ವೇಳೆಗೆ ದೇಶವನ್ನು ಇಂಗಾಲ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ.