Job Description: ನವದೆಹಲಿ : ಭಾರತ ಹಾಗು ರಷ್ಯಾ ರಾಷ್ಟ್ರಗಳು ಜಂಟಿ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ ಬ್ರಹ್ಮೋಸ್ ಕ್ಷಿಪಣಿಯ ಪರಿಷ್ಕ್ರತ ಆವೃತ್ತಿಯಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಹಲವು ಉಡಾವಣೆಗಳನ್ನು ಶೀಘ್ರದಲ್ಲೇ ಭಾರತೀಯ ಸೇನೆಯು ಕೈಗೊಳ್ಳುವುದಾಗಿ ಮೂಲಗಳು ಖಚಿತ ಪಡಿಸಿವೆ. ಭಾರತೀಯ DRDO ಸಂಸ್ಥೆ ಅಭಿವೃದ್ಧಿಪಡಿಸಿದ ಸುಧಾರಿತ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳು ಪ್ರಸ್ತುತ ಜಗತ್ತಿನ ಅತಿವೇಗದ ಕಾರ್ಯಾಚರಣೆ ವ್ಯವಸ್ಥೆಯನ್ನು ಹೊಂದಿದ್ದು, ಕ್ಷಿಪಣಿ ವ್ಯಾಪ್ತಿಯನ್ನು ಡಿಆರ್ಡಿಒ ಇತ್ತೀಚೆಗಷ್ಟೇ 298 ಕಿ.ಮೀ.ನಿಂದ 450 ಕಿ.ಮೀ.ಗೆ ಹೆಚ್ಚಿಸಿದೆ.