Job Description: ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿದ ವರ್ಷದಿಂದ ಆರಂಭವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಮೋದಿಯವರು ಮುಂದುವರೆಸಿದ್ದು, ಈ ಬಾರಿ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನವೆಂಬರ್ 14, 2020 ರಂದು ಯೋಧರ ಜತೆ ದೀಪಾವಳಿ ಆಚರಣೆಯಲ್ಲಿ ಭಾಗಿಯಾಗಿದ್ದರು. ಈ ಮೊದಲು ಮೋದಿಯವರು ದೀಪಾವಳಿ ಆಚರಿಸಿದ ಪ್ರದೇಶಗಳು : * 2014ರಲ್ಲಿ ಜಗತ್ತಿನ ಅತೀ ದೊಡ್ಡ ಯುದ್ಧ ಭೂಮಿ ಎಂದೇ ಹೆಸರಾಗಿರುವ ಸಿಯಾಚಿನ್ ಗ್ಲೇಸಿಯರ್ಸಿ * 2015ರಲ್ಲಿ ಪಂಜಾಬ್ ಗಡಿ * 2016ರಲ್ಲಿ ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಭಾರತ-ಚೀನಾ ಗಡಿ * 2017ರಲ್ಲಿ ಜಮ್ಮು-ಕಾಶ್ಮೀರದ ಗ್ಯುರೇಜ್ ಸೆಕ್ಟರ್ * 2018ರಲ್ಲಿ ಉತ್ತರಾಖಂಡದಲ್ಲಿರುವ ಚೀನಾ ಗಡಿಭಾಗ * 2019ರಲ್ಲಿ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಭಾಗ