Job Description: ಸಿಂಗಾಪುರ : ಚೀನಾ ಸೇರಿ ಏಷ್ಯಾದ 15 ರಾಷ್ಟ್ರಗಳು ಜಗತ್ತಿನ ಅತಿ ದೊಡ್ಡ ವ್ಯಾಪಾರ ಒಪ್ಪಂದವಾದ 'ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ'ಕ್ಕೆ ಇತ್ತೀಚಿಗೆ ಸಹಿ ಹಾಕಿದ್ದು, ಭಾರತವು ಈ ಒಪ್ಪಂದದಿಂದ ಹೊರಗುಳಿದಿದೆ. * ಇತ್ತೀಚಿಗೆ ಏರ್ಪಡಿಸಲಾದ ಆಗ್ನೇಯ ಏಷ್ಯಾದ ನಾಯಕರು ಹಾಗೂ ಅವರ ಪ್ರಾದೇಶಿಕ ಪಾಲುದಾರರ ವಾರ್ಷಿಕ ಶೃಂಗಸಭೆಯಲ್ಲಿ ಸತತ ಎಂಟು ವರ್ಷಗಳ ಮಾತುಕತೆಯಲಿದ್ದ ಈ ಒಪ್ಪಂದಕ್ಕೆ 15 ರಾಷ್ಟ್ರಗಳ ಮಧ್ಯೆ ಸಹಿ ಹಾಕಲಾಯಿತು. * ಇಂಡೊನೇಷ್ಯಾ, ಬ್ರೂನಿ, ವಿಯೆಟ್ನಾಂ, ಲಾವೋಸ್, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಪುರ, ಥಾಯ್ಲೆಂಡ್, ಮ್ಯಾನ್ಮಾರ್ ಹಾಗೂ ಕಾಂಬೋಡಿಯಾ ಒಪ್ಪಂದಕ್ಕೆ ಸಹಿ ಹಾಕಿದ್ದು. ಚೀನಾ, ಜಪಾನ್, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳು ಈ ಒಪ್ಪಂದದ ಅಡಿಯಲ್ಲಿ ಬರಲಿವೆ.