Job Description: ಸೋಫಿಯಾ : ಇತ್ತೀಚಿಗೆ ಬಲ್ಗೇರಿಯಾದಲ್ಲಿ ನಡೆದ “ಸೋಫಿಯಾ ಓಪನ್’ ಎಟಿಪಿ ಟೆನಿಸ್ ಕೂಟದಲ್ಲಿ ಇಟಲಿಯ 19 ವರ್ಷದ ಜೆನ್ನಿಕ್ ಸಿನ್ನರ್ ಅವರು ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಕಳೆದ 12 ವರ್ಷಗಳ ಎಟಿಪಿ ಇತಿಹಾಸದಲ್ಲೇ ಪ್ರಶಸ್ತಿ ಜಯಿಸಿದ ಅತಿ ಕಡಿಮೆ ವಯಸ್ಸಿನ ಆಟಗಾರ ಎನಿಸಿದ್ದಾರೆ. ಅಂತಿಮ ಪ್ರಶಸ್ತಿ ಸುತ್ತಿನಲ್ಲಿ ಕೆನಡಾದ ವಾಸೆಕ್ ಪಾಸ್ಪಿಸಿಲ್ ವಿರುದ್ಧ 6-4, 3-6, 7-6 ಅಂತರದಲ್ಲಿ ಗೆಲುವು ದಾಖಲಿಸಿದರು.