Job Description: ನವದೆಹಲಿ: 2020 ರ ನವೆಂಬರ್ 13ರಂದು ಆಯುರ್ವೇದ ದಿನದಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಆಯುರ್ವೇದ ಇನ್ಸ್ ಟ್ಯೂಷನ್ ಗಳನ್ನು ಉದ್ಘಾಟಿಸಿದರು. * ಗುಜರಾತ್ ನ ಜಾಮ್ ನಗರದಲ್ಲಿ ಇನ್ಸ್ ಟಿಟ್ಯೂಟ್ ಆಫ್ ಟೀಚಿಂಗ್ ಆಯಂಡ್ ರಿಸರ್ಚ್ ಇನ್ ಆಯುರ್ವೇದ(ಐಟಿಆರ್ ಎ) ಉದ್ಘಾಟಿಸಲಾಯಿತು. * ರಾಜಸ್ಥಾನದ ಜೈಪುರದಲ್ಲಿ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಆಯುರ್ವೇದ(ಎನ್ ಐಎ) ಕೇಂದ್ರವನ್ನು ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದ ಮೂಲಕ ಮೋದಿಯವರು ಚಾಲನೆ ನೀಡಿದರು. * ಈ ಆಯುರ್ವೇದ ಕೇಂದ್ರಗಳ ಮೂಲಕ 21ನೇ ಶತಮಾನದಲ್ಲಿ ಭಾರತವು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ. * 2016 ರಿಂದ ಆರಂಭಗೊಂಡಂತೆ ಧನ್ವಂತರಿ ಜಯಂತಿಯನ್ನು ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತಿದೆ.