Job Description: ನವದೆಹಲಿ: ಭಾರತ ಮತ್ತು ರಷ್ಯಾ ರಾಷ್ಟ್ರಗಳ ಸಹಭಾಗಿತ್ವದಲ್ಲಿ ತಯಾರಿಸಲಾದ ಬ್ರಹ್ಮೋಸ್ ಕ್ಷಿಪಣಿಗಳನ್ನ ಖರೀದಿಸಲು ದ್ವೀಪರಾಷ್ಟ್ರ ಫಿಲಿಪ್ಪೀನ್ಸ್ ಒಲವು ತೋರಿಸಿದೆ. ಹಾಗು ಈ ಕುರಿತು ಫಿಲಿಪ್ಪೀನ್ ಅಧ್ಯಕ್ಷ ರೊಡ್ರಿಗೋ ಡ್ಯುಟರ್ಟೆ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಈ ಒಪ್ಪಂದ ಸಫಲವಾದರೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಿದ ಮೊದಲ ರಾಷ್ಟ್ರವಾಗಿ ಫಿಲಿಪ್ಪೀನ್ಸ್ ಹೊರಹೊಮ್ಮಲಿದೆ.