Job Description: ಧಾರವಾಡ : ಧಾರಾವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಹಿರಿಯ ಕವಿ ಡಾ. ವಿ.ಸಿ. ಐರಸಂಗ ಇವರು ತಮ್ಮ 91 ನೇ ಇಲಿ ವಯಸ್ಸಿನಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದರು. ಕವಿ ಐರಸಂಗ ಅವರು ಅತ್ಯಂತ ಸರಳ ಜೀವಿಯಾಗಿದ್ದು, ನೂರಾರು ಅಶುಕವಿತೆಗಳನ್ನು ರಚಿಸಿ ಅವುಗಳನ್ನು ಪ್ಯಾಕೆಟ್ ಪುಸ್ತಕ ರೂಪದಲ್ಲಿ ಮುದ್ರಿಸಿ ತಮ್ಮ ಸೈಕಲ್ ಮೇಲಿಟ್ಟುಕೊಂಡು ಮಾರುತ್ತಿದ್ದರು. * ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. * ಇವರು ಧಾರಾವಾಡದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.