Job Description: ಇತ್ತೀಚಿಗೆ ಆಸ್ಟ್ರೇಲಿಯಾದ ಶಿಕ್ಷಣ ಸಚಿವ ಡಾನ್ ತೆಹನ್ ಮತ್ತು ಭಾರತದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವರ್ಚುವಲ್ ಕಾರ್ಯಕ್ರಮದ ಮೂಲಕ ಭಾರತ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಜಂಟಿ ಯೋಜನೆಯಾದ ವಾಟರ್ ಸೆಂಟರ್(ಜಲ ಕೇಂದ್ರ)(AIWC) ಕ್ಕೆ ಚಾಲನೆ ನೀಡಿದರು. ಈ ಜಲ ಕೇಂದ್ರವು ಉಭಯ ರಾಷ್ಟ್ರಗಳ ಒಟ್ಟು 21 ಪಾಲುದಾರರನ್ನು ಹೊಂದಿದ್ದು, ಭಾರತದ ಕಡೆಯಿಂದ ಐಐಟಿ ಗುವಾಹಟಿ ಮತ್ತು ಆಸ್ಟ್ರೇಲಿಯಾದ ಕಡೆಯಿಂದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯ ಜಂಟಿಯಾಗಿ ಮುನ್ನಡೆಸುತ್ತಿವೆ. ಈ ಜಲಕೇಂದ್ರದ ಮೂಲಕ ಉಭಯ ದೇಶಗಳು ಎದುರಿಸುತ್ತಿರುವ ಸಾಮಾನ್ಯ ನೀರಿನ ಸಮಸ್ಯೆಗಳು, ಪ್ರವಾಹ, ಬರ, ನೀರಿನ ಸುರಕ್ಷತೆ, ಹವಾಮಾನ ಬದಲಾವಣೆ, ನೀರಿನ ಅತಿಯಾದ ಬಳಕೆ, ನೀರಿನ ಗುಣಮಟ್ಟ ಕುಸಿತ ಸೇರಿ ವಿವಿಧ ಸಮಸ್ಯೆಗಳ ವಿರುದ್ಧ ಕ್ರಮಕೈಗೊಳ್ಳಲು ಜಲ ಕೇಂದ್ರವು ನೆರವಾಗಲಿದೆ. * ಹಿನ್ನಲೆ : ಜೂನ್ 2020 ರಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಜಂಟಿಯಾಗಿ ಜಲ ಕೇಂದ್ರದ ಸ್ಥಾಪನೆಯ ಘೋಷಣೆ ಮಾಡಿದ್ದರು.