Job Description: ಇಟಾನಗರ: ಅರುಣಾಚಲ ಪ್ರದೇಶದ ಸರ್ಕಾರವು ಶಾಲಾ ಮಕ್ಕಳ ದೇಶಪ್ರೇಮವನ್ನು ಉತ್ತೇಜಿಸಲು ವಿನೂತನ ಪ್ರಯೋಗವೊಂದಕ್ಕೆ ಮುಂದಾಗಿದ್ದು, ಶಾಲಾ ಮಕ್ಕಳಿಗೆ ತ್ರಿವರ್ಣ ಧ್ವಜ ಬಣ್ಣದ ಮಾಸ್ಕ್ ಗಳನ್ನು ವಿತರಣೆ ಮಾಡುತ್ತಿದೆ. ಅರುಣಾಚಲ ಪ್ರದೇಶದಲ್ಲಿ ನವೆಂಬರ್ 16ನೇ ತಾರೀಕಿನಂದು ಆರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತ ಅರುಣಾಚಲ ಪ್ರದೇಶ ಸರ್ಕಾರವು ಅಧಿಕೃತವಾಗಿ ಆದೇಶ ಹೊರಡಿಸಿದೆ ಈ ಆದೇಶದ ಅನ್ವಯ ನವೆಂಬರ್ 16 ರಿಂದ ಹತ್ತನೇ ತರಗತಿ ಹಾಗೂ 12 ನೇ ತರಗತಿ ಶಾಲಾ-ಕಾಲೇಜುಗಳನ್ನು ತೆರೆಯಲು ಸರ್ಕಾರ ಸಕಲ ಸಿದ್ಧತೆ ನಡೆಸಿದೆ, ಹಾಗೂ ಶಾಲಾ ಮಕ್ಕಳಿಗೆ 60 ಸಾವಿರ ಖಾದಿ ಬಟ್ಟೆಯ ಮಾಸ್ಕ್ ಖರೀದಿಸಲು ಅನುಮತಿ ನೀಡಲಾಗಿದ್ದು, ಈ ಮಾಸ್ಕ್ ಗಳನ್ನು ಖಾದಿ ಮತ್ತು ಗ್ರಾಮೋದ್ಯೋಗದಿಂದ ತಯಾರಿಸಲಾಗುತ್ತಿದೆ.