Job Description: 2020 ನೇ ಆರ್ಥಿಕ ವರ್ಷದಲ್ಲಿ ಭಾರತದ ಪ್ರತಿಷ್ಠಿತ IT ಸಂಸ್ಥೆಯ ಮುಖ್ಯಸ್ಥ ಅಜಿಮ್ ಪ್ರೇಮ್ ಜಿ ಯವರು ಅತ್ಯಂತ ಉದಾರ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 2020 ರ ಆರ್ಥಿಕ ವರ್ಷದಲ್ಲಿ ಅಜಿಮ್ ಪ್ರೇಮ್ ಜಿ ಯವರು ಸರಿ ಸುಮಾರು 7904 ಕೋಟಿ ರೂಪಾಯಿ ಮೊತ್ತವನ್ನು ವಿವಿಧ ಸಾಮಾಜಿಮುಖಿ ಕಾರ್ಯಗಳಿಗೆ ದಾನ ನೀಡಿದ್ದಾರೆ. ಇದು ದಿನವೊಂದಕ್ಕೆ 22 ಕೋಟಿ ರೂಪಾಯಿಯಷ್ಟು ಆಗಲಿದೆ. ಈ ಮೂಲಕ 2020 ನೇ ಆರ್ಥಿಕ ವರ್ಷದ ಭಾರತದ ಅತ್ಯಂತ ಉದಾರಿ ಉದ್ಯಮಿ ಎಂಬ ಹೆಗ್ಗಳಿಕೆಗೆ ಅಜಿಮ್ ಪ್ರೇಮ್ ಜಿ ಪಾಲಾಗಿದೆ ಎಂದು ಹುರುನ್ ರಿಪೋರ್ಟ್ ಇಂಡಿಯಾ ಮತ್ತು ಎಡೆಲ್ಗೈವ್ ಫೌಂಡೇಶನ್ ವರದಿ ಮಾಡಿವೆ. * 2019 ನೇ ಸಾಲಿನಲ್ಲಿ ಹೆಚ್ ಸಿಎಲ್ ಟೆಕ್ನಾಲಜೀಸ್ ನ ಶಿವ್ ನಡಾರ್ ಅತಿ ಹೆಚ್ಚು ದಾನ ನೀಡಿದ ಉದಾರಿ ಉದ್ಯಮಿಯಾಗಿದ್ದರು. * ರಿಲಾಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಖೇಶ್ ಅಂಬಾನಿ 458 ಕೋಟಿ ರೂಪಾಯಿಗಳ ದಾನ ನೀಡುವ ಮೂಲಕ ದಾನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.