Job Description: ಇತ್ತೀಚಿಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಅವರು ಮಾಲ್ಡೀವ್ಸ ಗೆ ಭೇಟಿ ನೀಡಿದ್ದು, ಇದೆ ಸಂದರ್ಭದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ 100 ಮಿಲಿಯನ್ ಅನುದಾನದ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. * ಈ ನಾಲ್ಕು ಒಪ್ಪಂದಗಳಲ್ಲಿ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಹಕಾರ, ಸಸ್ಯ ಮತ್ತು ಮಣ್ಣಿನ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಸೇರಿ ವಿವಿಧ ಒಪ್ಪಂದಗಳಿಗೆ ಭಾರತದಿಂದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಹಾಗೂ ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಸಹಿ ಹಾಕಿದರು. * ಇದೆ ವೇಳೆ ಭಾರತದ ವಿದೇಶಾಂಗ ಕಾರ್ಯದರ್ಶಿ ಮಾಲ್ಡೀವ್ಸ್ನ "ಇಂಡಿಯಾ ಫಸ್ಟ್" ನೀತಿಯನ್ನು ಶ್ಲಾಘಿಸಿದರು.