Job Description: ನವದಹೆಲಿ : 15ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಎನ್. ಕೆ. ಸಿಂಗ್ ಅವರು ಇತ್ತೀಚಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ 2021 -22 ರಿಂದ 2025 -26ನೇ ಸಾಲಿನ ಆರ್ಥಿಕ ವರ್ಷಗಳ ಸಮಗ್ರ ವರದಿಯನ್ನು ಸಲ್ಲಿಸಿದರು. ಹಣಕಾಸು ಆಯೋಗವು ಸಲ್ಲಿಸಿದ 2020-21ರ ಹಣಕಾಸು ವರ್ಷದ ಶಿಫಾರಸು ಒಳಗೊಂಡ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿ 2020ರ ಜನವರಿ 30ರಂದು ಸಂಸತ್ತಿನಲ್ಲಿ ಮಂಡಿಸಿದೆ. ಈ ಬಾರಿ ಹಣಕಾಸು ಆಯೋಗ ಸಲ್ಲಿಸಿದ ವರದಿಯಲ್ಲಿ ತೆರಿಗೆ ಹಂಚಿಕೆ, ಸ್ಥಳೀಯ ಸರ್ಕಾರದ ಅನುದಾನ, ವಿಪತ್ತು ನಿರ್ವಹಣಾ ಅನುದಾನದ, ವಿದ್ಯುತ್ ಕ್ಷೇತ್ರ, ಡಿಬಿಟಿ ಅಳವಡಿಸಿಕೊಳ್ಳುವಿಕೆ, ಘನತ್ಯಾಜ್ಯ ನಿರ್ವಹಣೆ ಸೇರಿ ಹಲವು ಕ್ಷೇತ್ರಗಳ ಕಾರ್ಯಕ್ಷಮತೆ ಪ್ರೋತ್ಸಾಹ ಪರೀಕ್ಷೆ ಮತ್ತು ಶಿಫಾರಸ್ಸಿಗೆ ಆಯೋಗಕ್ಕೆ ಮನವಿ ಮಾಡಲಾಗಿದೆ.