Job Description: ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ, ಜೊ ಬೈಡನ್ ಮುನ್ನಡೆ ಪಡೆದುಕೊಂಡಿದ್ದು, ಬಹುತೇಕ ಚುನಾವಣೆಯಲ್ಲಿ ಗೆಲುವು ಖಚಿತ ಪಡಿಸಿಕೊಂಡಿದ್ದಾರೆ, ಇನ್ನು ಬೈಡನ್ ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸುವುದೊಂದೇ ಬಾಕಿ. ಅಮೇರಿಕಾದಲ್ಲಿ ಕೋವಿಡ್ ಭೀತಿಯಿಂದ ಜನರು ಮತಗಟ್ಟೆಗಳಿಗೆ ತೆರಳಿ ಮತಚಲಾಯಿಸುವುದರ ಬದಲು ಈ ಬಾರಿ ಅತಿ ಹೆಚ್ಚು ಇಮೇಲ್ ಹಾಗು ಅಂಚೆ ಮೂಲಕ ಮತದಾನ ಮಾಡಿದುದರಿಂದ ಈ ಬಾರಿ ಅಂಚೆ ಮತ ಎಣಿಕೆ ಕಾರ್ಯ ವಿಳಂಬವಾಗಿದೆ. * ಪ್ರಸ್ತುತ ವರದಿಯ ಪ್ರಕಾರ ಟ್ರಂಪ್ ಪಕ್ಷದ 214 ಪ್ರತಿನಿಧಿಗಳು ಹಾಗೂ ಬೈಡನ್ ಅವರ ಪಕ್ಷದ 290 ಮಂದಿ ಆಯ್ಕೆಯಾಗಿದ್ದಾರೆ. * ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ವಿಜಯವನ್ನು ಈಗಾಗಲೇ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. * ಅಮೇರಿಕಾ ದೇಶದ ಅಧ್ಯಕ್ಷ ಸ್ಥಾನಕ್ಕೆ ಜೊ ಬೈಡನ್ ನೇಮಕಗೊಂಡರೆ, ಉಪಾಧ್ಯಕ್ಷ ಸ್ಥಾನವನ್ನು ಕಮಲಾ ಹ್ಯಾರಿಸ್ ಅಲಂಕರಿಸಲಿದ್ದಾರೆ.