Job Description: ನವದೆಹಲಿ: ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನದಲ್ಲಿದ್ದ ಮೊಹಮ್ಮದ್ ಮುಷ್ತಾಕ್ ಅಹಮದ್ ಅವರು ರಾಷ್ಟ್ರೀಯ ಕ್ರೀಡಾ ಸಂಹಿತೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಹಿನ್ನಲೆ ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನದಿಂದ ಕ್ರೀಡಾ ಸಚಿವಾಲಯ ಇವರನ್ನು ಕೆಳಗಿಳಿಸಿತ್ತು. ಆಗಿನಿಂದ ಹಾಕಿ ಇಂಡಿಯಾ ಅಧ್ಯಕ್ಷ ಹುದ್ದೆಗೆ ಹಂಗಾಮಿಯಾಗಿ ನೇಮಕಗೊಂಡಿದ್ದ ಜ್ಞಾನೇಂದ್ರೊ ಹಂಗಾಮಿ ಅವರನ್ನು ಪ್ರಸ್ತುತ ಹಾಕಿ ಇಂಡಿಯಾದ (AH) ನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಮಾಡಲಾಗಿದೆ.