Job Description: ನವದೆಹಲಿ: ಇತ್ತೀಚಿಗೆ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ರವರು ತಮ್ಮ ಕ್ಯಾಬಿನೆಟ್ಗೆ ಐವರು ನೂತನ ಸಚಿವರನ್ನು ನೇಮಕಗೊಳಿಸಿದ್ದು, ಇವರಲ್ಲಿ ಭಾರತೀಯ ಮೂಲದ ಪ್ರಿಯಾಂಕಾ ಅವರು ಒಬ್ಬರಾಗಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಕ್ಯಾಬಿನೆಟ್ ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಮೂಲದ ಸಂಸದರಾಗಿದ್ದಾರೆ. ಇವರು 2017 ರಲ್ಲಿ ಸಂಸತ್ತಿನಲ್ಲಿ ಮಲಯಾಳಿ ಭಾಷೆಯಲ್ಲಿ ಮಾತನಾಡುವ ಮೂಲಕ ಭಾರತೀಯರ ಗಮನ ಸೆಳೆದಿದ್ದರು. ಪ್ರಿಯಾಂಕಾ ಜನಿಸಿದ್ದು ತಮಿಳುನಾಡಿನ ಚೆನೈ ನಗರದಲ್ಲಿ ಹಾಗೂ ಅವರ ಕುಟುಂಬದ ಮೂಲ ಕೇರಳದಲ್ಲಿ.