Job Description: ಚೆನ್ನೈ: ಭಾರತದ ಹೆಮ್ಮೆಯ ಸಂಸ್ಥೆ ISRO ವು ರಾಡಾರ್ ಇಮೇಜಿಂಗ್ ಉಪಗ್ರಹ ಇಒಎಸ್-01 ಸೇರಿ ವಿವಿಧ ಒಟ್ಟು 10 ಉಪಗ್ರಹಗಳನ್ನು ಶ್ರೀಹರಿ ಕೋಟಾದ ಮೊದಲನೇ ಲಾಂಚ್ ಪ್ಯಾಡ್ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಒಎಸ್-01 ಉಪಗ್ರಹವು ಹಗಲು ಮತ್ತು ರಾತ್ರಿ ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಫೋಟೋ ತೆಗೆಯುವ ಸಾಮರ್ಥ್ಯಹೊಂದಿದ್ದು, ಈ ಮೂಲಕ ಎಲ್ಲ ರೀತಿಯ ನಾಗರಿಕ ಚಟುವಟಿಕೆಗಳನ್ನು ಇದು ದಾಖಲಿಸಲಿದೆ. ಈ ಮೂಲಕ ರಾಷ್ಟ್ರದ ಭದ್ರತೆ, ಸುರಕ್ಷತೆಗೆ ಉಪಯೋಗವಾಗಲಿದೆ. ಈ ಉಡಾವಣೆಯಲ್ಲಿ ಒಟ್ಟು 9 ವಿದೇಶಿ ಉಪಗ್ರಹಗನ್ನು ಉಡಾವಣೆಮಾಡಲಾಗಿದ್ದು, ಈ ಮೂಲಕ ಇಸ್ರೋ ಇಲ್ಲಿಯವರೆಗೆ ಒಟ್ಟು 328 ವಿದೇಶಿ ಉಪಗ್ರಹ ಉಡಾವಣೆ ಮಾಡಿದ ನೂತನ ದಾಖಲೆ ನಿರ್ಮಿಸಿತು.