Job Description: ಫೇಸ್ ಬುಕ್ ಒಡೆತನಕ ಪ್ರಮುಖ ಮೆಸೇಜಿಂಗ್ ಅಪ್ಲಿಕೇಶನ್ whatsapp ನಲ್ಲಿ UPI ಪಾವತಿಯನ್ನು ಆರಂಭಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ “ವಾಟ್ಸಾಪ್ ಪೇ” ಎಂಬ ವಾಟ್ಸಾಪ್ ನ ಹೊಸ ಸೇವೆ ಭಾರತದಲ್ಲಿ ಆರಂಭವಾಗಲಿದೆ. ವಾಟ್ಸ್ ಆಪ್ ಸಂಸ್ಥೆಯು "ವಾಟ್ಸಾಪ್ ಪೇ" ಎಂಬ ನೂತನ ಪಾವತಿ ಸೇವೆಗಾಗಿ ಜಿಯೋ ಪೇಮೆಂಟ್ ಬ್ಯಾಂಕ್ ಜೊತೆ ಸಹಭಾಗಿತ್ವವನ್ನು ಹೊಂದಿದ್ದು, ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಎಲ್ಲ ಬ್ಯಾಂಕುಗಳಲ್ಲಿ ಪಾಲುದಾರಿಕೆ ಪಡೆಕುಕೊಂಡಿದೆ. * ವಾಟ್ಸಾಪ್ ಪೇ ಮೂಲಕ ಬಳಕೆದಾರರು UPI ತಂತ್ರಾಂಶವುಳ್ಳ ಅಪ್ಲಿಕೇಶನ್ ಬಳಸಿ ಮತ್ತೊಬ್ಬ ಬಳಕೆದಾರರಿಗೆ ಹಣ ವರ್ಗಾವಣೆ ಮಾಡಬಹುದು. * ಮೂಲಗಳ ಪ್ರಕಾರ ಜನವರಿ 1, 2021 ರಿಂದ ವಾಟ್ಸಾಪ್ ಪೇ ಭಾರತದಲ್ಲಿ ಜಾರಿಗೆ ಬರಲಿದ್ದು, ಇದು ದೇಶದ 40 ಕೋಟಿಗೂ ಹೆಚ್ಚು ಬಳಕೆದಾರರಿಗೆ ಸೇವೆ ನೀಡಲು ಸಿದ್ಧವಿದೆ.