Job Description: ನವದೆಹಲಿ : ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ವ್ಯಾಪ್ತಿಯಲ್ಲಿ ಭಾರತ, ಅಮೆರಿಕ, ಜಪಾನ್ ದೇಶಗಳು ಜಂಟಿ ನೌಕಾ ಸಮರಾಭ್ಯಾಸ ನಡೆಸುತ್ತಾ ಬಂದಿದ್ದವು ಇದೀಗ ಇದೆ ನವೆಂಬರ್ನಲ್ಲಿ ನಡೆಯಲಿರುವ ಮಲಬಾರ್ ನೌಕಾಪಡೆ ಸಮರಾಭ್ಯಾಸದಲ್ಲಿ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾ ಕೂಡ ಸೇರಿಕೊಳ್ಳುವುದಾಗಿ ಭಾರತವು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯ ರಾಷ್ಟ್ರಗಳ ಚತುರ್ರಾಷ್ಟ್ರ ಮೈತ್ರಿಕೂಟದ ಬೃಹತ ಸಮರಾಭ್ಯಾಸ ನಡೆಯಲಿದೆ. * 2007 ರಲ್ಲಿ ಆಸ್ಟೇಲಿಯಾವು ಈ ಸಮರಾಭ್ಯಾಸದಲ್ಲಿ ಪಾಲ್ಗೊವುದಾಗಿ ತಿಳಿಸಿದಾಗ ಚೀನಾವು ಇದನ್ನು ವಿರೋಧಿಸಿದ ಹಿನ್ನಲೆ ಆಸ್ಟ್ರೇಲಿಯ ಹಿಂದೆ ಸರಿದಿತ್ತು. ಆದರೆ ಈಗ ಆಸ್ಟ್ರೇಲಿಯ ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದು, ಇದರಿಂದ ಚೀನಾಕ್ಕೆ ತೀವ್ರ ಮುಖಬಂಗವಾಗಿದೆ. * 1992ರಲ್ಲಿ ಮೊದಲ ಬಾರಿಗೆ ಮಲಬಾರ್ ನೌಕಾಪಡೆ ಸಮರಾಭ್ಯಾಸ ಆರಂಭಗೊಂಡಿತು. ಆರಂಭದಲ್ಲಿ ಅಮೆರಿಕ ಹಾಗೂ ಭಾರತ ಮಾತ್ರ ಈ ಸಮರಾಭ್ಯಾಸ ನಡೆಸುತ್ತಿದ್ದವು, 2015ರಲ್ಲಿ ಈ ನೌಕಾಪಡೆ ಕವಾಯತಿಗೆ ಜಪಾನ್ ಸೇರ್ಪಡೆಗೊಂಡಿತು. ಇದೀಗ ಆಸ್ಟ್ರೇಲಿಯಾ ಕೂಡ ಸೇರಿಕೊಳ್ಳಲಿದೆ.