Job Description: ನ್ಯೂಯಾರ್ಕ್: ಭೂಗ್ರಹದ ಉಪಗ್ರಹವಾದ ಚಂದಿರನ ಮೇಲೆ 4ಜಿ ಇಂಟರ್ನೆಟ್ ಜಾಲ ಸ್ಥಾಪಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಸಿದ್ಧತೆ ನಡೆಸಿದೆ. ಇನ್ನು ನಾಸಾದ ಈ ಕೆಲಸವನ್ನು ನಿರ್ವಹಿಸಲು ಟೆಲಿಕಾಂ ಆಗ್ರಾ ಸಂಸ್ಥೆಯಾದ ನೋಕಿಯಾ ಸೇರಿ ಹಲವು ಸಂಸ್ಥೆಗಳು ಗುತ್ತಿಗೆ ಪಡೆದಿವೆ. ಈ ಯೋಜನೆಯ ಮೂಲಕ 4ಜಿ ವ್ಯವಸ್ಥೆ ಚಂದ್ರನ ಮೇಲ್ಮೈ ಮೇಲೆ ಅತಿ ದೂರದ, ಅತಿ ವೇಗದ ಹಾಗೂ ದಕ್ಷ ಸಂವಹನಕ್ಕೆ ನೆರವಾಗಲಿದೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಯೋಜನೆಯು ಭವಿಷ್ಯದ ದಿನಗಳಲ್ಲಿ ಚಂದ್ರನ ಮೇಲೆ ಮಾನವ ವಲಸೆ ಹೋಗುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದು ನಾಸಾ ಆಡಳಿತಾಧಿಕಾರಿ ಜಿಮ್ ಬ್ರೖೆಡನ್ಸ್ಟೈನ್ ತಿಳಿಸಿದ್ದಾರೆ.