Job Description: ನವದೆಹಲಿ : ಭಾರತ ಸೇನೆಯ 14ನೇ ಫೈರ್ ಆಯಂಡ್ ಫ್ಯೂರಿ ಘಟಕದ ಕೋರ್ ಕಮಾಂಡರ್ ಆಗಿ ಲೆಫ್ಟಿನಂಟ್ ಜೆನೆರಲ್ ಪಿಜಿಕೆ ಮೆನನ್ ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಸ್ತುತ 14ನೇ ಫೈರ್ ಆಯಂಡ್ ಫ್ಯೂರಿ ಘಟಕದ ಕೋರ್ ಕಮಾಂಡರ್ ಆಗಿರುವ ಲೆ.ಜ. ಹರಿಂದರ್ ಸಿಂಗ್ ಅವರು ಇಂಡಿಯನ್ ಮಿಲಿಟರಿ ಅಕಾಡೆಮಿಯ ಕಮಾಂಡೆಂಟ್ ಬಡ್ತಿ ಪಡೆದಿದ್ದು, ಅವರಿಂದ ತೆರವಾದ ಹುದ್ದೆಗೆ ಮೆನನ್ ನೇಮಕಗೊಂಡಿದ್ದಾರೆ. ಫೈರ್ ಆಯಂಡ್ ಫ್ಯೂರಿ : * ಭಾರತೀಯ ಸೇನೆಯ ಫೈರ್ ಆಯಂಡ್ ಫ್ಯೂರಿ (14ನೇ ಕೋರ್ ಕಮಾಂಡ್) ಪೂರ್ವ ಲಡಾಖ್ ಪ್ರದೇಶದ ಸಂಪೂರ್ಣ ಗಡಿ ಪ್ರದೇಶದ ರಕ್ಷಣೆಯ ಜವಾಬ್ದಾರಿ ನಿರ್ವಹಿಸುತ್ತದೆ. ಭಾರತ - ಚೀನಾ ಮಧ್ಯ ಗಡಿಯಲ್ಲಿ ಸಂಘರ್ಷ ಏರ್ಪಟ್ಟ ಈ ಸಂದರ್ಭದಲ್ಲಿ ಇವರ ನೇಮಕ ಪ್ರಮುಖವಾಗಿದೆ. * ಈಗಾಗಲೇ ಭಾರತ-ಚೀನಾ ಗಡಿವಿವಾದದ ಸಂಬಂದಿಸಿದ ಏಳು ಸುತ್ತಿನ ಮಿಲಿಟರಿ ಮಾತುಕತೆಯಲ್ಲಿ ಮೆನನ್ ಅವರು ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ಮಾತುಕತೆಯ ನೇತೃತ್ವ ವಹಿಸಬೇಕಾಗುತ್ತದೆ.