Job Description: ನವದೆಹಲಿ : ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆ (DRDO)ಯು ಅಭಿವೃದ್ಧಿ ಪಡಿಸಿದ ಸಬಸಾನಿಕ್ ದಾಳಿಯ ಕ್ಷಿಪಣಿ 'ನಿರ್ಭಯ'ಯು ತನ್ನ ಪರೀಕ್ಷಾರ್ಥ ಹಾರಾಟದಲ್ಲಿ ವಿಫಲಗೊಂಡಿದೆ ಸುಮಾರು 1,000 ಕಿ.ಮೀ.ವ್ಯಾಪ್ತಿಯ ಸಬಸಾನಿಕ್ ದಾಳಿ ಮಾಡಬಲ್ಲ ಕ್ಷಿಪಣಿ ಇದಾಗಿದ್ದು, ತನ್ನ ಪರೀಕ್ಷಾರ್ಥ ಉಡಾವಣೆಯಲ್ಲಿ ತಾಂತ್ರಿಕ ದೋಷದಿಂದಾಗಿ ವಿಫಲಗೊಂಡಿರುವುದಾಗಿ ಮೂಲಗಳು ಖಚಿತ ಪಡಿಸಿವೆ. ಇತ್ತೀಚಿಗೆ ಒಡಿಶಾದ ಬಾಲಸೋರ್ನ ಪರೀಕ್ಷಾ ವಲಯದಿಂದ ಪರೀಕ್ಷಾರ್ಥ ಉಡಾವಣೆಗೊಳಿಸಿದ ಕೆಲವೇ ನಿಮಿಷಗಳಲ್ಲಿ ಕ್ಷಿಪಣಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಪತನಗೊಂಡಿದೆ.