Job Description: ಕೊರೊನಾ ಸೋಂಕಿನ ಕಾರಣ ಭಾರತದಲ್ಲಿ ವಿಧಿಸಿದ ಲಾಕ್ ಡೌನ್ ಪರಿಣಾಮ ಭಾರತದ ಆರ್ಥಿಕತೆಯು ಈ ಸಾಲಿನಲ್ಲಿ ಶೇಕಡಾ 10.3 ರಷ್ಟು ಕುಗ್ಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹೇಳಿದೆ ನೀಡಿದೆ. ಈ ಮೂಲಕ ಭಾರತವು ಸ್ವಾತಂತ್ರ್ಯಾ ನಂತರ ಕಂಡ ಅತಿ ದೊಡ್ಡ ಕುಸಿತ ಎಂದು ಹೇಳಿದೆ. ಬರುವ ವರ್ಷ ಭಾರತದ ಆರ್ಥಿಕತೆ 8.8% ಏರಿಕೆ ಆಗಬಹುದು ಎಂದು IMF ಅಂದಾಜಿಸಿದ್ದು, ಇನ್ನು ಬ್ರೆಜಿಲ್ ಆರ್ಥಿಕತೆ 5.8% ಇಳಿಕೆ, ರಷ್ಯಾ 4.1% ಕುಸಿತ, ದಕ್ಷಿಣ ಆಫ್ರಿಕಾ 8% ಇಳಿಕೆ ಮತ್ತು ಚೀನಾ 1.9% ಬೆಳವಣಿಗೆ ದಾಖಲಿಸುವುದಾಗಿ ಐಎಂಎಫ್ ಅಂದಾಜಿಸಿದೆ.