Job Description: 2020ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪುರಸ್ಕಾರವನ್ನು ಘೋಷಿಸಲಾಗಿದ್ದು, ಈ ಬಹುಮಾನಕ್ಕೆ ಅಮೆರಿಕಾದ ಪಾಲ್ ಆರ್. ಮಿಲ್ ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಜಂಟಿಯಾಯಾಗಿ ಆಯ್ಕೆಯಾಗಿದ್ದಾರೆ. "ಹರಾಜು ಸಿದ್ಧಾಂತದಲ್ಲಿನ ಸುಧಾರಣೆ ಮತ್ತು ಹೊಸ ಹರಾಜು ರೂಪ" ಕ್ಕಾಗಿ 2020 ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. * ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಪ್ರಧಾನ ಕಾರ್ಯದರ್ಶಿ ಗೊರಾನ್ ಹನ್ಸನ್ ರವರು ಸ್ಟಾಕ್ ಹೋಮ್ ನಲ್ಲಿ ಅರ್ಥಶಾಸ್ತ್ರದ ನೊಬೆಲ್ ವಿಜೇತರನ್ನು ಘೋಷಣೆ ಮಾಡಿದರು. * 1969 ರಿಂದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಆರಂಭಿಸಲಾಗಿದೆ. * ಈ ಪ್ರಶಸ್ತಿಯು 10 ಮಿಲಿಯನ್ ಕ್ರೋನ (1.1 ಮಿಲಿಯನ್ USD) ನಗದು ಬಹುಮಾನ ಜೊತೆಗೆ ಚಿನ್ನದ ಪದಕ ಒಳಗೊಂಡಿದೆ.