Job Description: ನವದೆಹಲಿ : ಭಾರತವು ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದು, ಅವುಗಳ ಪೈಕಿ ಅರೋಗ್ಯ ಸೇತು ಆಯಪ್ ಬಳಕೆಯು ಸಹ ಸೇರಿದೆ. ಈ ಆಯಪ್ ಮೂಲಕ ಕೋವಿಡ್19 ಸಮೂಹವನ್ನು ಗುರುತಿಸಲು ಆರೋಗ್ಯ ಸಂಸ್ಥೆಗೆ ನೆರವಾಗುವ ಭಾರತದ ಆರೋಗ್ಯಸೇತು ಮೊಬೈಲ್ ಆಯಪ್ ಬಿಡುಗಡೆ ಗೊಳಿಸಿದ್ದು, ಈ ಆಯಪ್ ಗೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಶಂಸೆ ದೊರೆತಿದೆ. * ಪ್ರಸ್ತುತ ಈ ಆರೋಗ್ಯಸೇತು ಆಯಪ್ ಅನ್ನು ಸುಮಾರು 150 ಮಿಲಿಯನ್ ಗು ಅಧಿಕ ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. * ಕೇಂದ್ರ ಸರಕಾರವು ಲಾಕ್ ಡೌನ್ ಅವಧಿಯ ಎಪ್ರಿಲ್ನಲ್ಲಿ ಆರೋಗ್ಯಸೇತು ಆಯಪ್ಗೆ ಚಾಲನೆ ನೀಡಿತ್ತು. * ಈ ಆಯಪ್ ಮೂಲಕ ಸೋಂಕಿಗೆ ಸಂಬಂಧಿಸಿದ ಮಾಹಿತಿ, ಸಲಹೆ ಹಾಗೂ ಮುನ್ನೆಚ್ಚರಿಕಾ ಕ್ರಮ ಸೇರಿ ಹಲವು ಸೇವೆಯನ್ನು ಒದಗಿಸುತ್ತದೆ.