Job Description: ನವದೆಹಲಿ: ದೇಶವ್ಯಾಪಿ ಹರಡಿರುವ ಕೊರೋನಾ ವೈರಸ್ ಸೋಂಕಿನ ಭೀತಿಯಿಂದ 2020 ನೇ ಸಾಲಿನಲ್ಲಿ ಇದೆ ಡಿಸೆಂಬರ್ 12 ರಿಂದ 20ರವರೆಗೆ ಬೆಲ್ಗ್ರೇಡ್ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ, ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ರದ್ದುಪಡಿಸಿ ನಿರ್ಣಯ ಕೈಗೊಳ್ಳಲಾಗಿದೆ. ಒಂದು ವೇಳೆ ಚಾಂಪಿಯನ್ಶಿಪ್ ನಡೆಸಿದ್ದಲ್ಲಿ, ಸೋಂಕು ಹರಡುವ ಭೀತಿ ಹೆಚ್ಚಿರುವ ಕಾರಣ ಹಾಗೂ ಪ್ರಸ್ತುತ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲದರಿಂದ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ ಅನ್ನು ರದ್ದುಗೊಳಿಸಲು ವಿಶ್ವ ಕುಸ್ತಿ ಸಂಸ್ಥೆ ತೀರ್ಮಾನಿಸಿದೆ.