Job Description: ರಕ್ಷಣ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿ ಪಡಿಸಿದ ರುಸ್ತುಂ-2 ಡ್ರೋನ್ ಪರೀಕ್ಷಾರ್ಥ ಪ್ರಯೋಗವು ಯಶಸ್ವಿಗೊಂಡಿದೆ. ಈ ಮೂಲಕ ಭಾರತೀಯ ವಾಯುಪಡೆಗೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಚಿತ್ರದುರ್ಗ ಸಮೀಪದ ನಾಯಕನಹಟ್ಟಿ ಬಳಿಯ DRDO ಪ್ರದೇಶದ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಚಾಲಕ ರಹಿತ ಈ ಯುದ್ಧ ಬಳಕೆಯ ಡ್ರೋನ್ ಪರೀಕ್ಷೆ ನಡೆಸಲಾಗಿದ್ದು, ಸತತ 8 ಗಂಟೆಗಳ ಕಾಲ ಯಶಸ್ವಿ ಹಾರಾಟ ನಡೆಸಿದೆ. ಈ ಡ್ರೋನ್ 40 ಕಿ.ಮೀ. ವ್ಯಾಪ್ತಿಯಲ್ಲಿ 16 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದ್ದು ವಿಶೇಷವಾಗಿದೆ. ರುಸ್ತುಂ-2 ವಿಶೇಷತೆಗಳು : ರುಸ್ತುಂ-2 ನಾನಾ ರೀತಿಯ ಶಸ್ತ್ರಾಸ್ರಗಳನ್ನು ಸಾಗಿಸಬಲ್ಲುದು. ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನದ ಬಳಸಿ ನಿರ್ಮಿಸಲಾಗಿರುವ ರುಸ್ತುಂ-2 ಮಾನವ ರಹಿತ ವಿಮಾನವಾಗಿದೆ. ಪ್ರಸ್ತುತ ಭಾರತೀಯ ವಾಯುಸೇನೆ ಇದೇ ಮಾದರಿಯ ಇಸ್ರೇಲ್ ನಿರ್ಮಿತ ಡ್ರೋನ್ಗಳ ಬಳಕೆ ಮಾಡುತ್ತಿದೆ.