Job Description: ವಾಷಿಂಗ್ಟನ್: ಅಮೆರಿಕದ ದೇಶದ ಫಿಲಡೆಲ್ಫಿಯಾಕ್ಕೆ ಭಾರತದಿಂದ ಅಂದಾಜು 18 ಲಕ್ಷ ಮಾಸ್ಕ್ಗಳನ್ನು ದೇಣಿಗೆ ನೀಡಿ ರಫ್ತು ಮಾಡಲಾಗಿದೆ. ಅಮೆರಿಕದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ ಆರನೇ ಪ್ರಮುಖ ನಗರವಾಗಿರುವ ಫಿಲಡೆಲ್ಫಿಯಾದ ಮೇಯರ ಅವರ ಮನವಿಯ ಮೇರೆಗೆ ಭಾರತವು ಮಾಸ್ಕ ಗಳನ್ನೂ ಕಳುಹಿಸಿಕೊಟ್ಟಿದ್ದು, ಈ ಮಾಸ್ಕಗಳನ್ನು ಇಲ್ಲಿನ ಮುಖ್ಯ ಭೂಮಿಕೆ ಕೆಲಸಗಾರರು ಧರಿಸಲು ನೀಡಲಾಗುವದು. ಈ ಮೂಲಕ ಉಭಯ ರಾಷ್ಟ್ರಗಳ ಸ್ನೇಹ ಸಂಬಂಧ ಉದಾಹರಣೆಯಾಗಿದೆ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.