Job Description: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ವರ್ಷ ಏಪ್ರಿಲ್ 24ರಂದು ಆರಂಭಿಸಿದ "SVAMITVA" ಯೋಜನೆಗೆ ಚಾಲನೆ ನೀಡಿದರು. ಈ ನೂತನ ಯೋಜನೆಯಡಿ ಒಟ್ಟು 6 ರಾಜ್ಯಗಳ ಅಂದಾಜು 132,000 ಭೂ ಮಾಲೀಕರು ತಮ್ಮ ಒಡೆತನದ ಜಮೀನನ್ನು ಆರ್ಥಿಕ ಆಸ್ತಿಗಳಾಗಿ ಪರಿವರ್ತಿಸಲು ಅವಕಾಶ ನೀಡಲಾಗುವದು ಅಲ್ಲದೆ ಆಸ್ತಿ ಕಾರ್ಡ್ ಗಳನ್ನ ಪಡೆಯಲು ಇವರು ಅರ್ಹರಾಗಿರುತ್ತಾರೆ. * ಇನ್ನು 2024 ನೇ ವರ್ಷದ ವೇಳೆಗೆ ಒಟ್ಟು 640,000 ಹಳ್ಳಿಗಳ ಗುರಿಯನ್ನು ಈ ಯೋಜನೆ ಹೊಂದಿದೆ. * ಪ್ರಸ್ತುತ ಈ ಯೋಜನೆಯಡಿಯಲ್ಲಿ ಉತ್ತರ ಪ್ರದೇಶದ 346, ಹರಿಯಾಣದಿಂದ 221, ಮಹಾರಾಷ್ಟ್ರದ 100, ಉತ್ತರಾಖಂಡದ 50, ಮಧ್ಯ ಪ್ರದೇಶದ 44 ಮತ್ತು ಕರ್ನಾಟಕದ 2 ಗ್ರಾಮ ಸೇರಿ ಒಟ್ಟು 763 ಗ್ರಾಮಗಳಲ್ಲಿ ಪ್ರಾಪರ್ಟಿ ಕಾರ್ಡ್ ಗಳನ್ನು ವಿತರಿಸಲಾಗುವುದು.