Job Description: ಟ್ರಿಪೋಲಿ : ಇತ್ತೀಚಿಗೆ ಲಿಬಿಯಾದಲ್ಲಿ ಅಪಹರಣಕ್ಕೊಳಗಾದ 7 ಜನ ಭಾರತೀಯರು ಸುರಕ್ಷಿತರಾಗಿ ಬಿಡುಗಡೆಗೊಂಡಿರುವುದಾಗಿ ತುನಿಷಿಯಾದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಪುನೀರ್ ರಾಯ್ ಕುಂಡಲ್ ಖಚಿತಪಡಿಸಿದ್ದಾರೆ. ಅಪಹರಣಕ್ಕೊಳಗಾದ ಈ 7 ಜನ ಭಾರತೀಯರು ಆಂಧ್ರಪ್ರದೇಶ, ಬಿಹಾರ, ಗುಜರಾತ್, ಉತ್ತರಪ್ರದೇಶ ರಾಜ್ಯಗಳ ಮೂಲದವರಾಗಿದ್ದು, ಲಿಬಿಯಾ ದೇಶದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಸುತ್ತಿದ್ದರು. ಇವರು ಇತ್ತೀಚಿಗೆ ಭಾರತಕ್ಕೆ ಹಿಂದಿರುಗಲು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ ವೇಳೆ ಅಪಹರಣಕ್ಕೊಳಗಾಗಿದ್ದರು.