Job Description: ಬೆಂಗಳೂರು: ಕನ್ನಡದ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ತುಳು ಭಾಷೆಯ ಸುಮಾರು 375 ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ರಾಜನ್ ಅವರು ತಮ್ಮ 87 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಸಹೋದರರಾದ ನಾಗೇಂದ್ರ ಜತೆ ಸಂಗೀತ ಸಂಯೋಜನೆ ಮಾಡುತ್ತಿದ್ದ ಇವರು ರಾಜನ್- ನಾಗೇಂದ್ರ ಎಂದಲೇ ಖ್ಯಾತಿ ಪಡೆದಿದ್ದರು. ಇವರ ಜೋಡಿ 1950ರಿಂದ 1990ರವರೆಗೆ ರಾಜನ್ ನಾಗೇಂದ್ರ ಜೋಡಿ ಎಂದಲೇ ಪ್ರಸಿದ್ದಿ ಪಡೆದಿದ್ದರು.