Job Description: ನವದೆಹಲಿ: ಭಾರತದ ಒಟ್ಟು ಐದು ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ ಕಡಲ ತೀರಗಳಿಗೆ ಅಂತಾರಾಷ್ಟ್ರೀಯ ಮಟ್ಟದ 'ಬ್ಲೂ ಫ್ಲ್ಯಾಗ್' ಮಾನ್ಯತೆ ಲಭಿಸಿದೆ. ಈ ಕುರಿತು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ. ಬ್ಲೂ ಫ್ಲಾಗ್ ಮಾನ್ಯತೆ ಪಡೆದ ಕಡಲ ತೀರಗಳ ವಿವರಗಳು : * ಕಾಸರಗೋಡು ಮತ್ತು ಪಡುಬಿದ್ರಿ (ಕರ್ನಾಟಕ), * ಕಪ್ಪಡ್ (ಕೇರಳ), * ಋಷಿಕೊಂಡ (ಆಂಧ್ರಪ್ರದೇಶ), * ಶಿವರಾಜ್ಪುರ (ದ್ವಾರಕಾ-ಗುಜರಾತ್), * ಘೋಘ್ಲಾ (ದಿಯು), * ಗೋಲ್ಡನ್ ಬೀಚ್(ಒಡಿಶಾ), * ರಾಧಾನಗರ್ (ಅಂಡಮಾನ್-ನಿಕೋಬಾರ್) * ಭಾರತವು ಕೇವಲ ಎರಡು ವರ್ಷ ಅವಧಿಯಲ್ಲಿ ಒಟ್ಟು 8 ಬ್ಲೂ ಫ್ಲ್ಯಾಗ್ ಗಳಿಸಿದ ಏಷ್ಯಾ-ಪೆಸಿಫಿಕ್ ಪ್ರದೇಶದ ಪ್ರಥಮ ದೇಶ ಎನಿಸಿಕೊಂಡಿದೆ. ಬ್ಲೂ ಫ್ಲಾಗ್ ಮಹತ್ವ : ಬ್ಲೂ ಫ್ಲಾಗ್ ಮಾನ್ಯತೆ ಪಡೆದ ಕಡಲ ತೀರಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅನುದಾನದಲ್ಲಿ ಎಲ್ಲ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿಸುವದರಿಂದ, ಪ್ರವಾಸಿಗರು ಅದರಲ್ಲೂ ವಿದೇಶಿಗರು ಈ ಬೀಚ್ಗಳಿಗೆ ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಇದರಿಂದಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಎಲ್ಲ ಕ್ಷೇತ್ರಗಳೂ ಅಭಿವೃದ್ಧಿ ಕಾಣಲಿವೆ.