Job Description: ಬ್ಯಾಟರಿಯಿಂದ ಚಲಿಸುವ ಎಲೆಕ್ಟ್ರಿಕ್ ವಾಹನಗಳಿಗೆ ದೆಹಲಿ ಸರ್ಕಾರ ವಿಧಿಸುತ್ತಿದ್ದ ರಸ್ತೆ ತೆರಿಗೆಯಿಂದ ವಿನಾಯಿತಿ ಘೋಷಿಸಿದ್ದು, ಈ ಮೂಲಕ ವಾಹನಗಳಿಂದ ಉಂಟಾಗುತ್ತಿದ್ದ ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ. ದಿನಾಂಕ 11 ಅಕ್ಟೋಬರ್ ಭಾನುವಾರದಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದು, ಬ್ಯಾಟರಿಯಿಂದ ಚಲಿಸುವ ವಾಹನಗಳಿಗೆ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಕೇಜ್ರಿವಾಲ್ ಸರ್ಕಾರವು ಆಗಸ್ಟ್ ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನ ನೀತಿ ಘೋಷಿಸಿದ್ದು, ಈ ಘೋಷಣೆಯ ಪ್ರಕಾರ ದೆಹಲಿಯಲ್ಲಿ ಎಲೆಕ್ಟ್ರಿಕಲ್ ವಾಹನಗಳಿಗೆ ನೋಂದಣಿ ಶುಲ್ಕ, ರಸ್ತೆ ತೆರಿಗೆ ಮನ್ನಾ ಸೇರಿ ಹೊಸ ಎಲೆಕ್ಟ್ರಿಕ್ ಕಾರಿಗೆ 1.5 ಲಕ್ಷ ರುಪಾಯಿವರೆಗೆ ಪ್ರೋತ್ಸಾಹಧನ ಸೇರಿ ಹಲವು ಸೌಲಭ್ಯಗಳನ್ನು ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಘೋಷಿಸಿತ್ತು.