Job Description: ನವದೆಹಲಿ: ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್ಒ) ಒಟ್ಟು ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ಮಿಸಿದ 44 ಸೇತುವೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇತ್ತೀಚಿಗೆ ಉದ್ಘಾಟನೆಗೊಳಿಸಿದರು. ಜಮ್ಮು ಕಾಶ್ಮೀರದಲ್ಲಿ - 10, ಲಡಾಖ್ ನಲ್ಲಿ - 8, ಹಿಮಾಚಲಪ್ರದೇಶದಲ್ಲಿ - 3, ಪಂಜಾಬ್ ನಲ್ಲಿ - 4, ಉತ್ತರಾಖಂಡ್ ನಲ್ಲಿ - 8 , ಅರುಣಾಚಲದಲ್ಲಿ 8 ಮತ್ತು ಸಿಕ್ಕಿಂನ 4 ಸೇತುವೆಗಳು ಸೇರಿ ಒಟ್ಟು 44 ಸೇತುವೆಗಳನ್ನು ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್ಒ) ನಿರ್ಮಾಣಗೊಳಿಸಿದ್ದು, ಕೇಂದ್ರ ರಕ್ಷಣಾ ಸಚಿವರು ವಿಡಿಯೋ ಕಾನ್ಫರೆನ್ಸ್ ಸಭೆಯ ಮೂಲಕ ಈ ಎಲ್ಲ ಸೇತುವೆಗಳಿಗೆ ಚಾಲನೆ ನೀಡಿದರು.