Job Description: ನವದೆಹಲಿ : ಅಕ್ಟೋಬರ್ 15 ರಂದು ಭಾರತದ ಮಾಜಿ ರಾಷ್ಟ್ರಪತಿ ಹಾಗು ಬಾಹ್ಯಾಕಾಶ ವಿಜ್ಞಾನಿ ಭಾರತ ರತ್ನ ದಿವಂಗತ "ಡಾ.ಎಪಿಜೆ ಅಬ್ದುಲ್ ಕಲಾಂ"ರ 89 ನೇ ಜನ್ಮದಿನವಾಗಿದ್ದು, ಈ ದಿನವನ್ನು ಪ್ರತಿ ವರ್ಷ "ವಿಶ್ವ ವಿದ್ಯಾರ್ಥಿಗಳ ದಿನಾಚರಣೆ" ಎಂದು ಆಚರಿಸಲಾಗುತ್ತದೆ. ಡಾ. ಅಬ್ದುಲ್ ಕಲಾಂ ಅವರು ಭಾರತ ಕಂಡ ಶ್ರೇಷ್ಠ ವಿಜ್ಞಾನಿ, ನೆಚ್ಚಿನ ಶಿಕ್ಷಕ, ಮೇಧಾವಿ, ರಾಜಕಾರಣಿ ಯಾಗಿ ಭಾರತೀಯರ ಮನದಲ್ಲಿ ನೆಲೆಯೂರಿದ್ದು, ಇವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವಿಶ್ವಸಂಸ್ಥೆಯು 2010ರಲ್ಲಿ ಅಕ್ಟೋಬರ್ 15ನ್ನು ಇವರ ಜನ್ಮ ದಿನವನ್ನು "ವಿಶ್ವ ವಿದ್ಯಾರ್ಥಿಗಳ ದಿನ"ವನ್ನಾಗಿ ಘೋಷಿಸಿದೆ. * ಅಬ್ದುಲ್ ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. * ಕಲಾಂ ಅವರು 1931ರ ಅಕ್ಟೋಬರ್ 15ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. * ಕಲಾಂ ಅವರು 2002 ರಿಂದ 2007ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. * 2015ರ ಜುಲೈ 27ರಂದು ಶಿಲ್ಲಾಂಗ್ನಲ್ಲಿ ವಿದ್ಯಾರ್ಥಿ ಉಪನ್ಯಾಸ ನೀಡುವಾಗ ವೇದಿಕೆ ಮೇಲೆ ಕುಸಿದು ಬಿದ್ದು, ಕೊನೆಯುಸಿರೆಳೆದರು. * ಭಾರತದ ಕ್ಷಿಪಣಿಗಳ ಪಿತಾಮಹ ಎಂದು ಇವರನ್ನು ಗುರುತಿಸಲಾಗುತ್ತದೆ.