Job Description: ನವದೆಹಲಿ: ಹಲವು ಟೆಲಿಕಾಂ ಸಂಸ್ಥೆಗಳ ಸೇವೆಯಿಂದ ಬಾರಿ ನಷ್ಟಕ್ಕೊಳಗಾದ ಸರ್ಕಾರೀ ಸ್ವಾಮ್ಯದ BSNL ಸಂಸ್ಥೆಗೆ ಆರ್ಥಿಕ ಬಲ ತುಂಬಲು ಕೇಂದ್ರ ಸರ್ಕಾರ ಹೊಸ ಆದೇಶವೊಂದನ್ನ ಜಾರಿ ಮಾಡಿದ್ದು, ಈ ಆದೇಶದ ಅನ್ವಯ ಇನ್ನು ದೇಶದ ಎಲ್ಲ ಸರ್ಕಾರೀ ಕಚೇರಿಗಳಲ್ಲಿ BSNL ಸೇವೆಯನ್ನು ಕಡ್ಡಾಯಗೊಳಿಸಿದೆ. * 2019-20ರ ಸಾಲಿನಲ್ಲಿ ಬಿಎಸ್ಎನ್ಎಲ್ ಸಂಸ್ಥೆ 15,500 ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸಿದ್ದು, ಅಲ್ಲದೆ 2008ರಲ್ಲಿ 80 ಕೋಟಿಯಷ್ಟು ಚಂದಾರರನ್ನು ಹೊಂದಿದ ಈ ಸಂಸ್ಥೆಯು ಪ್ರಸ್ತುತ 80 ಲಕ್ಷ ಚಂದಾದಾರನ್ನು ಮಾತ್ರ ಹೊಂದಿದೆ. * ಕೇಂದ್ರ ಸರ್ಕಾರ ಹೊಸ ಆದೇಶದ ಅನ್ವಯ ಇನ್ನು ಸರ್ಕಾರದ ಎಲ್ಲ ಸಚಿವಾಲಯಗಳು, ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ BSNL ಮತ್ತು MTNL ದೂರಸಂಪರ್ಕ ಸೇವೆಯನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.