Job Description: ಪಾಲಕ್ಕಾಡ್ : ಕೇರಳ ರಾಜ್ಯದ ಮಲಯಾಳಂ ಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಅಕ್ಕಿಥಮ್ ಅಚ್ಯುತನ್ ನಂಬೂದರಿ ಅವರು ತಮ್ಮ ವಯೋಸಹಜ ಕಾಯಿಲೆಯಿಂದ ಕೇರಳದ ತ್ರಿಶೂರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. * ಇವರು 2019 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು. ಸೆಪ್ಟೆಂಬರ್ 24, 2019ರಂದು ಕೇರಳದ ಪಾಲಕ್ಕಾಡ್ ನ ಸರಳ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. * ಕೇರಳ ಸರಕಾರದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ 'ಎಳಥುಚಾನ್ ಪ್ರಶಸ್ತಿ, ಭಾರತ ಸರ್ಕಾರದ "ಪದ್ಮಶ್ರೀ" ಪುರಸ್ಕಾರ, 'ಕೇರಳ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ, 'ಒಡಕ್ಕುಳಾಲ್' ಪ್ರಶಸ್ತಿ, 'ವಲ್ಲಥೋ' ಪ್ರಶಸ್ತಿ, 'ವಯಲಾರ್' ಪ್ರಶಸ್ತಿ, 'ಆಸಾನ್' ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.