Job Description: 2020 ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪುರಸ್ಕೃತರ ಹೆಸರು ಬಹಿರಂಗಗೊಂಡಿದ್ದು, ಈ ವಿಭಾಗದಲ್ಲಿ ವಿಶೇಷ ಸಂಶೋಧನೆ ನಡೆಸಿದ ಇಬ್ಬರು ಮಹಿಳಾ ವಿಜ್ಞಾನಿಗಳಾದ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಜೆನಿಫರ್ ಎ.ಡೌಡ್ನ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಇಬ್ಬರು ಮಹಿಳಾ ವಿಜ್ಞಾನಿಗಳು ತಳಿಗುಣ(ಜೀನ್) ತಂತ್ರಜ್ಞಾನ (ಜೀನೋಮ್ ಎಡಿಟಿಂಗ್) ವಿಧಾನದ ಅಭಿವೃದ್ಧಿಗಾಗಿ ನಡೆಸಿದ ಸಂಶೋಧನೆಯನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ.