Job Description: ವಾಷಿಂಗ್ಟನ್: ಜಾಗತಿಕವಾಗಿ ವ್ಯಾಪಿಸಿದ ಕೋರೋಣ ಸೋಂಕಿನ ಹಿನ್ನಲೆ ಜಗತ್ತಿನಾದ್ಯಂತ ಕಡುಬಡವರ ಸಂಖ್ಯೆ 2021 ರೊಳಗಾಗಿ 15 ಕೋಟಿ ತಲುಪಬಹುದೆಂದು ವಿಶ್ವ ಬ್ಯಾಂಕ್ ಎಚ್ಚರಿಸಿದೆ. ಕೋರೋಣ ಇಂದಾಗಿ ಬಹುತೇಕ ಎಲ್ಲ ದೇಶಗಳು ವಿಧಿಸಿದ ಲಾಕ್ ಡೌನ್ ಇಂದಾಗಿ ಜನರು ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು, ಎಲ್ಲ ದೇಶಗಳು ಆರ್ಥಿಕತೆಯನ್ನು ಬಲಪಡಿಸುವಲ್ಲಿ ಉತ್ತಮ ಕ್ರಮಗಳನ್ನು ಕೈಗೊಳ್ಳುವದು ಅಗತ್ಯವೆಂದು ವಿಶ್ವ ಬ್ಯಾಂಕ್ ತಿಳಿಸಿದೆ. 1998ರ ಬಳಿಕ ಇದೆ ಮೊದಲ ಬಾರಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮುಂದಿನ ಒಂದು ವರ್ಷ ಅವಧಿಯಲ್ಲಿ ಶೇಕಡಾ 1.4 ರಷ್ಟು ಜನರು ತೀವ್ರ ಬಡತನಕ್ಕೊಳಗಾಗಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಸಿದೆ.