Job Description: ನವದೆಹಲಿ: 5ಜಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಸೇರಿ ಇತರ ಪ್ರಮುಖ ಕ್ಷೇತ್ರಗಳಲ್ಲಿನ ಬೆಳವಣಿಗೆ ಕುರಿತು ಪರಸ್ಪರ ಸಹಕಾರಕ್ಕಾಗಿ ಭಾರತ ಮತ್ತು ಜಪಾನ್ ರಾಷ್ಟ್ರಗಳು ಇತ್ತೀಚಿಗೆ ಒಪ್ಪಂದ ಮಾಡಿಕೊಂಡಿವೆ. ಚೀನಾ ಮೂಲದ ಸಂಸ್ಥೆ 'ಹುವಾಯಿ' 5ಜಿ ತಂತ್ರಜ್ಞಾನವನ್ನು ಹೊಂದಿದ್ದು, ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಿದ್ಧತೆ ನಡೆಸಿವೆ. ಇದೀಗ ಭಾರತ ಕೂಡ ಈ ತಂತ್ರಜ್ಞಾನ ಕುರಿತು ಜಪಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಭದ್ರತಾ ಲೋಪದ ಕಾರಣ "ಹುವಾಯಿ" ಕಂಪನಿಯನ್ನು ಅಮೆರಿಕಾವು ನಿಷೇಧಿಸಿದ್ದು, ಇತರೆ ರಾಷ್ಟ್ರಗಳೂ ಈ ಕಂಪನಿಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಂತೆ ಸೂಚಿಸಿದೆ.