Job Description: ನವದೆಹಲಿ: ಕೋರೋಣ ಹಿನ್ನಲೆ ಸ್ಥಗಿತಗೊಳಿಸಲಾಗಿದ್ದ IRCTC ಯ ತೇಜಸ್ ಎಕ್ಸ್ ಪ್ರೆಸ್ ರೈಲುಗಳ ಕಾರ್ಯಾಚರಣೆಯನ್ನು ಮತ್ತೆ ಇದೆ ದಿನಾಂಕ ಅಕ್ಟೋಬರ್ 17 ರಿಂದ ಲಖನೌ-ನವದೆಹಲಿ ಮತ್ತು ಅಹಮದಾಬಾದ್-ಮುಂಬೈ ಮಾರ್ಗ ಮಧ್ಯ ಪುನರಾರಂಭಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ಈ ಪ್ರಯಾಣಕ್ಕೆ ಕೆಲ ನಿಬಂಧನೆಗಳನ್ನು ವಿಧಿಸಲಾಗಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಫೇಸ್ ಕವರ್ / ಮಾಸ್ಕ್ ಬಳಕೆ ಕಡ್ಡಾಯ, ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳವುದು ಸೇರಿ ಹಲವು ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. ಅಲ್ಲದೆ, ಪ್ರಯಾಣಿಕರಿಗೆ ಸ್ಯಾನಿಟೈಸರ್ ಬಾಟಲ್, ಒಂದು ಮಾಸ್ಕ್, ಒಂದು ಫೇಸ್ ಶೀಲ್ಡ್ ಮತ್ತು ಒಂದು ಜೋಡಿ ಕೈಗವಸುಗಳನ್ನು ಹೊಂದಿರುವ 'ಕೋವಿಡ್-19 ಪ್ರೊಟೆಕ್ಷನ್ ಕಿಟ್' ನೀಡಲಾಗುವುದು.