Job Description: ನವದೆಹಲಿ : ಇತ್ತೀಚಿಗೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಭಾರತ, ಆಸ್ಟ್ರೇಲಿಯಾ, ಜಪಾನ್, ಅಮೆರಿಕ ರಾಷ್ಟ್ರಗಳ ವಿದೇಶಾಂಗ ಸಚಿವರ ಚತುಷ್ಕೋನ ಭದ್ರತಾ ಸಮ್ಮೇಳನ (ಕ್ವಾಡ್ ಸಮ್ಮೇಳನ) ನಡೆಯಿತು. ಈ ಸಮ್ಮೇಳನದಲ್ಲಿ ಎಲ್ಲ ರಾಷ್ಟ್ರಗಳ ಮುಖ್ಯಸ್ಥರುಗಳು ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿನ ಚೀನದ ಉದ್ಧಟತನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ನಿರ್ಧಾರಕ್ಕೆ ಬರಲಾಯಿತು. ಈ ಚತುಷ್ಕೋನ ಭದ್ರತಾ ಸಮ್ಮೇಳನ ಸಭೆಯಲ್ಲಿ ಭಾರತದಿಂದ ವಿದೇಶಾಂಗ ಸಚಿವ ಜೈಶಂಕರ್, ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪಿಯೂ , ಆಸ್ಟ್ರೇಲಿಯಾದ ಮ್ಯಾರಿಸ್ ಪಾಯ್ನೆ ಹಾಗೂ ಜಪಾನ್ನ ತೊಷಿಮಿಟ್ಸು ಮೊಟೆಗಿ ಭಾಗಿಯಾಗಿದ್ದರು.