Job Description: ಸ್ಟಾಕ್ಹೋಮ್ : ಬ್ರಿಟನ್ನ ರೋಜರ್ ಪೆನ್ರೋಸ್, ಜರ್ಮನಿಯ ರೈನ್ಹಾರ್ಟ್ ಗೆಂಝೆಲ್ ಮತ್ತು ಅಮೆರಿಕದ ಆಯಂಡ್ರಿಯಾ ಗೇಝ್ರಿಗೆ ಎಂಬ ಮೂವರು ವಿಜ್ಞಾನಿಗಳು ಕಪ್ಪು ಕುಳಿಗಳ ಬಗ್ಗೆ ನಡೆಸಿದ ಸಂಶೋಧನೆಗಳನ್ನು ಪರಿಗಣಿಸಿ 2020 ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಣೆ ಮಾಡಲಾಗಿದೆ. ಕಪ್ಪು ಕುಳಿ : ಕಪ್ಪು ಕುಳಿ ಒಂದು ಬಾಹ್ಯಾಕಾಶದ ಒಂದು ಭಾಗವಾಗಿದ್ದು, ಇದರಲ್ಲಿನ ದ್ರವ್ಯವು ಒತ್ತೊತ್ತಾಗಿ ಬೆಸೆದುಕೊಂಡಿದ್ದು, ಇದರಿಂದ ಉಂಟಾಗುವ ಗುರುತ್ವ ಕ್ಷೇತ್ರದಿಂದ ತಪ್ಪಿಸಿಕೊಳ್ಳಲು ಬೆಳಕಿಗೂ ಕೂಡ ಸಾಧ್ಯವಾಗುವುದಿಲ್ಲ.